Sunday, May 17, 2020

ಕನಕಮಲ್ಲಿಗೆ.

ಮುಂಜಾನೆ ಅರಳುವ
ಮೃದುಹೃದಯಿ
ಸಿಂಗಾರಕ್ಕೆ ಬಂಗಾರಕ್ಕಿಂತ
ಮೇಲಿವಳು
ಮುಟ್ಟಿದರೆ ಗಟ್ಟಿ ನಲುಗುವಳು
ಕಟ್ಟಿದರೆ ಹಾರವಾಗುವಳು
ಯಾವ ದೇವರಿಗೆ ಅರ್ಪಿಸಿದರೂ
ಒಲ್ಲೆ ಎನ್ನಳು
ಯಾರು ಮುಡಿಗೇರಿಸಿದರೂ
ಹರುಷದಿಂದ ಇರುವಳು
ಗಿಡ ಮರಬಳ್ಳಿಗಳಲ್ಲಿದ್ದರೂ
ದುಂಬಿಗೆ ಅರ್ಪಿಸುವಳು
ಪರಿಮಳ ಬೀರಿ
ಅವರಿವರೆನ್ನದೆ ಸೇರುವಳು
ತನ್ನ ಬಣ್ಣಗಳಿಂದ ಎಲ್ಲರ
ಹೃದಯ ಕದಿಯುವಳು
ಕತ್ತಲಾಗಲು ಕರಗುವಳು

                        ಗೀತ ಕೆ ಸಿ
                          ಹಾಸನ