Tuesday, April 7, 2020

ಲಾಕ್ ಡೌನ್ ನೀಡಿದೆ ನಮ್ಮದೇ ಸಮಯ

ನಾನು ವೃತ್ತಿಯಲ್ಲಿ ಶಿಕ್ಷಕಿ. ಎಂಟು ಗಂಟೆ ಹತ್ತು ನಿಮಿಷಕ್ಕೆ ಮನೆಯಿಂದ ಹೂರಟು ಸಂಜೆ 6.00 ರಿಂದ 7.00 ಕ್ಕೆ ಮನೆ ಸೇರುತ್ತಿದ್ದ ಕಾರಣ,
ಪ್ರತಿದಿನ ಮುಂಜಾನೆ ಬಂದ ಪತ್ರಿಕೆ ಸಂಜೆ ಓದುತ್ತಿದ್ದೆ. ಈಗ ಬಿಸಿಬಿಸಿ ಕಾಫಿ ಜೊತೆ ಬಿಸಿ ಬಿಸಿ ಸುದ್ದಿ ಮುಂಜಾನೆ    ಓದೋಹಾಗೆ ಆಗಿದೆ. ಅಬ್ಬಾ ಮನಸ್ಸು ಹಾಯಾಗಿದೆ.
* ಮಗನಿಗೆ ವರ್ಕ್ ಫ್ರಮ್ ಹೋಮ್, ಬಗೆ ಬಗೆ ಅಡುಗೆ ಮಾಡುವುದು, ಚಿತ್ತಾರದೊಂದಿಗೆ ಬಡಿಸುವುದು, ಅದನ್ನು ಫೋಟೋ ತೆಗೆದು ಆತ್ಮೀಯರಿಗೆ ಕಳಿಸುವುದು.
*ಚಂದದ ರಂಗೋಲಿ ಬಿಡಿಸುವುದು, ನಿಧಾನವಾಗಿ ಮನೆ ಕೆಲಸ ಮಾಡಿ ಉಳಿದ ಸಮಯದಲ್ಲಿ  ದೂರದ ಊರಲ್ಲಿ ಇರೋ ಕುಟುಂಬದ ಸದಸ್ಯರ ಜೊತೆ ವಿಡಿಯೋಕರೆಮಾಡುವುದು, ಕವನಬರೆಯೋದು, ಓದೋದು, ಹೊಲಿಗೆ ಕೆಲಸ, ಸಂದಿ ಮೂಲೆ ಹುಡುಕಿ ಸ್ವಚ್ಛ ಮಾಡ್ತಾ ಇರೋದು ,ಆತ್ಮೀಯರಿಗೆ ಕರೆಮಾಡುವುದು.* ಮಜಾ ನೋಡಿ ಲಾಕ್ಡೌನ್ ದಿನಾನೇ ವಾಷಿಂಗ್ ಮಷೀನ್ ರಿಪೇರಿ ಗೆ ಬರುವುದು! ಇರ್ಲಿ ಬಟ್ಟೆ ತೊಳೆಯುವುದು ವ್ಯಾಯಾಮ ಆಗುತ್ತಿದೆ.
* ಆಗುವುದೆಲ್ಲಾ ಒಳ್ಳೆಯದೇ ಅಂದುಕೊಳ್ಳೋಣ, ಪ್ರತಿದಿನ ಸಮಯದ ಹಿಂದೆ ಹಿಂದೆ  ಓಡ್ತಾ ಇದ್ವಿ ಈಗ ನಮ್ಮದೇ ಸಮಯ.
*ಹುಟ್ಟಿಸಿದ ದೇವರು ಹುಲ್ಲು ಮೇಯಿಸುವುದಿಲ್ಲ ಅನ್ನೋ ಗಾದೆ ಮಾತು ಕರೋನ ದಿಂದ ಸತ್ಯ ಆಗಿದೆ.
*ಪ್ರತಿ ಸಂದರ್ಭದಲ್ಲೂ ಧನಾತ್ಮಕ ಋಣಾತ್ಮಕ ಚಿಂತನೆಗಳು ಇದ್ದೇ ಇರುತ್ತವೆ ಆದರೂ ಸಮಾಜದ ಹಿತದೃಷ್ಟಿಯಿಂದ ನಮ್ಮ ಒಳಿತಿಗಾಗಿ ನಿಯಮ ಪಾಲಿಸೋಣ, ಮನೆಯಲ್ಲಿ ಹರುಷದಿಂದ ಸಮಯ ಸದ್ವಿನಿಯೋಗ ಮಾಡಿಕೊಳ್ಳುತ್ತ ಪ್ರಕೃತಿ ಮಾತೆಗೆ ಹರುಷ ನೀಡಿ ನಮಗಾಗಿ ಸೇವೆಗೈಯುವ ಸರ್ವರಿಗೂ ಹೃದಯತುಂಬಿ ನಮಿಸಿ ಶುಭಕೋರೋಣ.
    ವಿಜಯವಾಣಿ ಹೃದಯವಾಣಿ ಯಾಗಿರುವೆ .

Wednesday, April 1, 2020

ಕೋರೋಣ

ಪೋಲಿಸ್ ದೇವರು
ಮಾಡಿದ  ತಪ್ಪೇ ನ್ರಪ್ಪ.

ಅವರು ಕೂಡ
ಮನುಷ್ಯರೇ ಅಲ್ವೇನ್ರಪ್ಪ.

ಕೊರೋನ ಅಂಟಿದ
ಬಂಧುಗಳೇ ಕೇಳ್ರಪ್ಪ.

ಮನಸ್ಸನ್ನ ಗಟ್ಟಿ ಮಾಡಿ
ಮನೆಯಲ್ಲೇ ಕೊಡ್ರಪ್ಪ.

ಒಳ್ಳೆ ಕಾಲ ಬೇಗ ಬೇಗ
ಬಂದೇ ಬಿಡುತೈತಪ್ಪ.

ನಮಗೆಲ್ಲಾ ಮೂಡಿಸಲ್ಲಿಕ್ಕೆ ಅರಿವು
ನಾಟಕ ಮಾಡ್ತಾ, ಹೇಳ್ತಾರಲ್ಲ ಹಾಡು.

 ಕೊರೋನ ಬರುತ್ತೆ ಬೀದಿಗೆ ಬರಬೇಡಿ
ಕೂಗಿ ಕೂಗಿ ಹೇಳ್ತಾರಲ್ಲ ಪೋಲಿಸ್ ಅಣ್ಣವೃ.

ಸಾಮಾಜಿಕ ಅಂತರ ಕಾಪಾಡಿ ಅಂತ
ರಸ್ತೆಗಿಳಿದರೆ ಬಸ್ಕಿ ಹೊಡೆಸಿ ಕೈಮುಗಿ ತಾರಪ್ಪ.

ಮನೆಯೊಳಗಿರಲಿ ಅಂತ ಗಿಣಿಗೇಳ್ದ0ಗೆ ಹೇಳಿ
ಬೀದಿಗೆ ಬಂದವರಿಗೆ ಕುಂಕುಮ ಇಟ್ಟು ಮಂಗಳಾರತಿ ಮಾಡ್ತಾರಪ್ಪ.


ಸೋಂಕಿತರ ಮನೆಮನೆ ಬೀದಿ ಬೀದಿ
ಕಾಯ್ತಾರಲ್ಲ ರಕ್ಷಕರು.

ನಮ್ಮ ಅಣ್ಣ ,ತಮ್ಮ ,ತಂದೆ
ಅಕ್ಕ ,ತಂಗಿ ,ಅಮ್ಮ  ಪೊಲೀಸ್ ಆಗಿದ್ದಾರೆ
ಅಂದುಕೊಳ್ಳೋಣ ಎಲ್ಲರೂ.

ಬಿಸಿಲು ನೆರಳು ಕಾಯಿಲೆ ಅನ್ನದೆ
ಮಾಡ್ತಾರಲ್ಲ ಸೇವೆ.

ಏನ್ ಮಾಡಿದ್ರು ತಪ್ಪು ಅಂತ
ಕಾಮಾಲೆ ಕಣ್ಣು   ಬ್ಯಾಡ್ರಪ್ಪ.

ಕೈಮುಗಿದು  ಬೇಡಿಕೊಳ್ತೀನಿ
ಅವರ ಸೇವೆ ಕಮ್ಮಿ ಮಾಡೋಣ.

ಮನೆಯಲ್ಲಿ ಇರೋಣ
ಮಾನವರಾಗೋಣ.











ಕೊರೋನ /ಕರೋನ

ಕೋಟಿ ಕೋಟಿ
ರೋಗಾಣುಗಳ
ನಯವಂಚಕತೆಯಿಂದ

ಕೋಟಿ ಜನ
ರೋಸಿ ಹೋಗಿ
ನಲುಗು ತಿಹರು

ಕೋರಿಕೆಗೂ ಬಗ್ಗದ ಜನ
ರೋಡಿನಲ್ಲಿ ಬಿದ್ದು
ನಶಿಸಿಹೋಗುತಿಹರು

ಕೊರೋನ
ರೋಷಾವೇಷ
ನಂಬದ ರೀತಿ ಹೊಕ್ಕಿದೆ

ಕೊರೋನ
ರೋಗದಿಂದ ಮುಕ್ತಿಗೆ
ನಡು ಬೀದಿಗೆ ಬರಬಾರದು

ಕೊಬ್ಬು ಬಿಟ್ಟು
ರೋಗ ಕಂಜಿ ಮನೆಯಲ್ಲಿದ್ದರೆ
ನಮ್ಮ ನಾವು ಉಳಿಸಬಹುದು

ಕೊರೋನ
ರೋಗದಿಂದ
ನಾವು ಮುಕ್ತ ಮುಕ್ತ ಎಂದು
ಸಾರಬಹುದು.

ಆಗಬಹುದು ಎಲ್ಲರೂ ಒಮ್ಮೆ
ಶಿಸ್ತಿನ ಸಿಪಾಯಿ
ತೋರಬಹುದು ಸರ್ವೇಜನ ಸುಖಿನೋ ಭವ
ಭಾರತವು ಎಂದು.




ಮನೆಯಲ್ಲಿ ಕೂರೋಣ

ಮಾನವ ಜನ್ಮ ದೊಡ್ಡದು
ಇದ ಹಾಳುಮಾಡಿಕೊಳ್ಳಬೇಡಿ
ಹುಚ್ಚಪ್ಪಗಳಿರಾ. ಎನ್ನುವ
ದಾಸಶ್ರೇಷ್ಠರ ನುಡಿ ನೆನಪಿಸಿಕೊಳ್ಳೋಣ

ಮರುಜನ್ಮ ನೋಡಿರೋರು ಯಾರು?
ಕೊರೋನ ಮಹಾಮಾರಿಗೆ
ಬಲಿಯಾಗದೆ ಇರೋಣ ಅದಕ್ಕೆ
ಹೇಳಿದಷ್ಟು ದಿನ ಮನೆಯಲ್ಲಿ ಕೂರೋಣ



ಬಾಯ್ ಬಿಡಿ

ಯಾರಿಗೂ ಹೇಳೋಣು ಬ್ಯಾಡ ಯಾರಿಗೂ ಅನ್ಬೇಡಿ.
 ಕೊರೋನ ಇದ್ರೆ ಬಾಯ್ ಬಿಡಿ.
ದೇವರಾಗಿ ಡಾಕ್ಟರ್ ಇದ್ದಾರೆ.
ಬದುಕು ಬಂಗಾರ ಮಾಡ್ತಾರೆ.

ಕೊರೋನ

ಕೊರೋನ
ಒಬ್ಬರಿಂದ
ಒಬ್ಬರಿಗೆ
ಹರಡದಿರೋಣ.
ಕುವೆಂಪು
ನುಡಿ
ನೆನೆಯೋಣ.
ಅಲ್ಪ ಮಾನವ ನಾಗದೆ
ವಿಶ್ವ ಮಾನವರಾಗೋಣ.