Wednesday, April 1, 2020

ಕೊರೋನ /ಕರೋನ

ಕೋಟಿ ಕೋಟಿ
ರೋಗಾಣುಗಳ
ನಯವಂಚಕತೆಯಿಂದ

ಕೋಟಿ ಜನ
ರೋಸಿ ಹೋಗಿ
ನಲುಗು ತಿಹರು

ಕೋರಿಕೆಗೂ ಬಗ್ಗದ ಜನ
ರೋಡಿನಲ್ಲಿ ಬಿದ್ದು
ನಶಿಸಿಹೋಗುತಿಹರು

ಕೊರೋನ
ರೋಷಾವೇಷ
ನಂಬದ ರೀತಿ ಹೊಕ್ಕಿದೆ

ಕೊರೋನ
ರೋಗದಿಂದ ಮುಕ್ತಿಗೆ
ನಡು ಬೀದಿಗೆ ಬರಬಾರದು

ಕೊಬ್ಬು ಬಿಟ್ಟು
ರೋಗ ಕಂಜಿ ಮನೆಯಲ್ಲಿದ್ದರೆ
ನಮ್ಮ ನಾವು ಉಳಿಸಬಹುದು

ಕೊರೋನ
ರೋಗದಿಂದ
ನಾವು ಮುಕ್ತ ಮುಕ್ತ ಎಂದು
ಸಾರಬಹುದು.

ಆಗಬಹುದು ಎಲ್ಲರೂ ಒಮ್ಮೆ
ಶಿಸ್ತಿನ ಸಿಪಾಯಿ
ತೋರಬಹುದು ಸರ್ವೇಜನ ಸುಖಿನೋ ಭವ
ಭಾರತವು ಎಂದು.




2 comments:

  1. ನಿಮ್ಮ ಕವಿತೆ ಚೆನ್ನಾಗಿದೆ. ಇದನ್ನು ಕನ್ನಡ ಪ್ರಕಟಿಸಬಹುದೇ??. . .

    ReplyDelete
  2. ನಮಸ್ತೆ
    ಧನ್ಯವಾದಗಳು ಸರ್.

    ReplyDelete